ಸಾಕಾರ ಹದಿನೆಂಟು ಕುಳವನಂಗದಲ್ಲಿ ಆಚರಿಸುತ್ತ
ಅಲ್ಲಲ್ಲಿಗೆ ಭಕ್ತ, ಅಲ್ಲಲ್ಲಿಗೆ ಮಾಹೇಶ್ವರ,
ಅಲ್ಲಲ್ಲಿಗೆ ಪ್ರಸಾದಿಯಾಗಿಪ್ಪ
ಆ ಸಾಕಾರವನೇನೆಂದುಪಮಿಸುವೆ!
ನಿರಾಕಾರ ಹದಿನೆಂಟುಕುಳವನಾತ್ಮನಲ್ಲಿ ಆಚರಿಸುತ್ತ
ಅಲ್ಲಲ್ಲಿಗೆ ಪ್ರಾಣಲಿಂಗಿ, ಅಲ್ಲಲ್ಲಿಗೆ ಶರಣ,
ಅಲ್ಲಲ್ಲಿಗೆ ಐಕ್ಯನಾಗಿಪ್ಪ
ಆ ನಿರಾಕಾರವನೇನೆಂದುಪಮಿಸುವೆ!
ಇಂತು ಉಭಯಸ್ಥಲ ಒಂದಾಗಿ
ನಿಂದ ನಿಜದ ಘನದಲ್ಲಿ
ಕುಳವಡಗಿತ್ತು, ಕೂಡಲಚೆನ್ನಸಂಗಾ.
Art
Manuscript
Music
Courtesy:
Transliteration
Sākāra hadineṇṭu kuḷavanaṅgadalli ācarisutta
allallige bhakta, allallige māhēśvara,
allallige prasādiyāgippa
ā sākāravanēnendupamisuve!
Nirākāra hadineṇṭukuḷavanātmanalli ācarisutta
allallige prāṇaliṅgi, allallige śaraṇa,
allallige aikyanāgippa
ā nirākāravanēnendupamisuve!
Intu ubhayasthala ondāgi
ninda nijada ghanadalli
kuḷavaḍagittu, kūḍalacennasaṅgā.