Index   ವಚನ - 883    Search  
 
ಅಂಗದ ಮೇಲೆ, ಲಿಂಗಸಾಹಿತ್ಯವಾದ ಬಳಿಕ ಸ್ಥಾವರಲಿಂಗವ ಪೂಜಿಸಬಾರದು ತನ್ನ ಪುರುಷನ ಬಿಟ್ಟು ಅನ್ಯಪುರುಷರ ಸಂಗ ಸಲ್ಲುವುದೆ? ಕರಸ್ಥಲದಲ್ಲಿ ಲಿಂಗದೇವನಿದ್ದಂತೆ ಧರೆಯ ಮೇಲಣ ಪ್ರತಿಷ್ಠೆಗೆರಗಿದಡೆ ನರಕದಲ್ಲಿಕ್ಕುವ ನಮ್ಮ ಕೂಡಲಚೆನ್ನಸಂಗಮದೇವಾ.