Index   ವಚನ - 898    Search  
 
ಅಂಗವೆ ಅಮಳೋಕ್ಯ, ಲಿಂಗವೆ ಮುಖಸೆಜ್ಜೆಯಾಗಿ ಆ ಲಿಂಗವೆ ಭುಂಜಗ, ಅಂಗವೆ ನಾಗವತ್ತಿಕೆಯಾದ ಬಳಿಕ ಬೇರರಸಲುಂಟೆ? ಅಪ್ರತಿಮ ಪ್ರಾಣನಾಥನಾದಬಳಿಕ ಇನ್ನು ಬೇರರಸಲುಂಟೆ? ಅಂಗಲಿಂಗಸುಸಂಗ ಶರಣರ ಸಂಗದಲ್ಲಿರಿಸಯ್ಯ ಕೂಡಲಚೆನ್ನಸಂಗಮದೇವಾ.