Index   ವಚನ - 912    Search  
 
ಅಗ್ಘವಣಿಯನೆ ತುಂಬಿ, ಪುಷ್ಪವನೆ ತಂದು ಪೂಜಿಸಿ ಲಯಕ್ಕೊಳಗಾದರು. ಜನಮರುಳೋ ಜಾತ್ರೆಮರುಳೊ ಅಗ್ಘವಣಿಯನೆ ತುಂಬಿದ ಜಲ ಬತ್ತಿಹೋಯಿತ್ತು, ಪುಷ್ಪವನೆ ತಂದು ತಂದು ಗಿಡು ಅಡವಿ ಕೂಡಿತ್ತು. ನೀ ಪೂಜಿಸಿದ ಪೂಜೆ ಗಿಡುವು ಮಡುವಿಗಲ್ಲದೆ ನಿನಗೆಲ್ಲಿಹುದೋ? ಮಾಡಿ ಮಾಡಿ [ಮಾ]ಡಿಕೆ ಕೇಡು. ಮಾಡಿ ಮನ ಮರುಗದೆ, ನೀಡಿ ನಿಜವಿಲ್ಲದೆ ಅಣ್ಣಗಳ ಕೆಟ್ಟ ಕೇಡು ನೋಡಾ ಮಹಾದಾನಿ ಕೂಡಲಚೆನ್ನಸಂಗಮದೇವಾ.