Index   ವಚನ - 913    Search  
 
ಅಗ್ನಿಯ ಕೂಡಾಡಿ ಕಾಷ್ಠಂಗಳೆಲ್ಲ ಕೆಟ್ಟ ಕೇಡ ನೋಡಯ್ಯ, ಜಲಧಿಯ ಕೂಡಾಡಿ ಘಟ್ಟ-ಬೆಟ್ಟಗಳೆಲ್ಲ ಕೆಟ್ಟ ಕೇಡ ನೋಡಯ್ಯ, ಜ್ಯೋತಿಯ ಕೂಡಾಡಿ ಕತ್ತಲೆ ಕೆಟ್ಟ ಕೇಡ ನೋಡಯ್ಯ, ನಿಮ್ಮ ಶರಣರ ಕೂಡಾಡಿ, ನನ್ನ ಭವಂಗಳು ಕೆಟ್ಟ ಕೇಡ ನೋಡಯ್ಯ, ಕೂಡಲಚೆನ್ನಸಂಗಮದೇವಾ.