Index   ವಚನ - 916    Search  
 
ಅಚ್ಚಪ್ರಸಾದಿ ಅಚ್ಚಪ್ರಸಾದಿಯೆಂದು ನಿಚ್ಚಕ್ಕೆ ಬಗುಳುವ ಕುನ್ನಿಗಳ ನೋಡಾ! ಬರದ ನಾಡಿಂದ ಬಂದ ಬಣಗುಗಳಂತೆ ಮತ್ತಿಕ್ಕುವರೊ ಇಕ್ಕರೊ ಎಂದು, ಒಟ್ಟಿಸಿಕೊಂಡು ತಿಂದು ಮಿಕ್ಕುದ ಬಿಸುಡುವ ಕುನ್ನಿಗಳ ಮೆಚ್ಚುವನೆ ನಮ್ಮ ಕೂಡಲಚೆನ್ನಸಂಗಮದೇವರು.