Index   ವಚನ - 926    Search  
 
ಅದ್ವೈತಿಗಳು ಲಿಂಗಾರಾಧನೆ ಹುಸಿಯೆಂದು ಬುದ್ಧಿಗೆಟ್ಟರು. ಆಗಮವನರಿಯದೆ ಬೊಮ್ಮನ ನೆರೆದಡೆ ಬ್ರಹ್ಮನ ಶಿರವ ಕೊಂಡುದನರಿಯಿರೊ! ಬೊಮ್ಮವಾದಿಗಳೆಲ್ಲ ಲಿಂಗಕ್ಕೆ ದೂರವಾದರು. ನಮ್ಮ ಕೂಡಲಚೆನ್ನಸಂಗನ ಶರಣರು ಜಗದ್ವಂದ್ಯರಾದರು.