ಅಯ್ಯಾ, ಅನಾದಿ ವಸ್ತುವೆ ಗುರು-ಶಿಷ್ಯ,
ಭಕ್ತ-ಜಂಗಮ, ಗುರು-ಲಿಂಗ,
ಶರಣಸತಿ-ಲಿಂಗಪತಿ- ಎಂಬ ಸಾಕಾರಲೀಲೆಯ ಧರಿಸಿ
ಅವಿರಳಾನಂದ ನಿಜ ವೇಧಾ-ಮಂತ್ರ-ಕ್ರಿಯಾ
ದೀಕ್ಷಾಯುಕ್ತವಾದ ಮೂರೇಳು ಇಪ್ಪತ್ತೊಂದು ದೀಕ್ಷೆಯ
ಭಿನ್ನವಿಲ್ಲದೆ ಸದ್ಗುರುಮುಖದಿಂದ ಅರಿದಾನಂದಿಸ ಬಲ್ಲಡೆ:
ಸಹಜ ದೀಕ್ಷೆಯುಳ್ಳ ಶ್ರೀಗುರುಲಿಂಗಜಂಗಮ,
ಭಕ್ತ ಮಹೇಶ ಪ್ರಸಾದಿ ಪ್ರಾಣಲಿಂಗಿ ಶರಣ ಐಕ್ಯ
ನಿರವಯಮೂರ್ತಿಯೆಂಬೆನಯ್ಯಾ
ಕೂಡಲಚೆನ್ನಸಂಗಮನಲ್ಲಿ.
Art
Manuscript
Music
Courtesy:
Transliteration
Ayyā, anādi vastuve guru-śiṣya,
bhakta-jaṅgama, guru-liṅga,
śaraṇasati-liṅgapati- emba sākāralīleya dharisi
aviraḷānanda nija vēdhā-mantra-kriyā
dīkṣāyuktavāda mūrēḷu ippattondu dīkṣeya
bhinnavillade sadgurumukhadinda aridānandisa ballaḍe:
Sahaja dīkṣeyuḷḷa śrīguruliṅgajaṅgama,
bhakta mahēśa prasādi prāṇaliṅgi śaraṇa aikya
niravayamūrtiyembenayyā
kūḍalacennasaṅgamanalli.