Index   ವಚನ - 331    Search  
 
ಮಾಟ ಮದುವೆಯ ಮನೆ. ದಾನಧರ್ಮ ಸಂತೆಯ ಪಸಾರ, ಸಾಜಸಾಜೇಶ್ವರಿ ಸೂಳೆಗೇರಿಯ ಸೊಬಗು. ವ್ರತನೇಮವೆಂಬುದು ವಂಚನೆಯ ಲುಬ್ಧವಾಣಿ. ಭಕ್ತಿಯೆಂಬುದು ಬಾಜಿಗಾರರಾಟ. ಬಸವಣ್ಣಗೆ ತರ; ನಾನರಿಯದೆ ಹುಟ್ಟಿದೆ, ಹುಟ್ಟಿ ಹುಸಿಗೀಡಾದೆ. ಹುಸಿ ವಿಷಯದೊಳಡಗಿತ್ತು, ವಿಷಯ ಮಸಿಮಣ್ಣಾಯಿತ್ತು. ನಿನ್ನ ಗಸಣೆಯನೊಲ್ಲೆ ಹೋಗಾ, ಚೆನ್ನಮಲ್ಲಿಕಾರ್ಜುನಾ.