Index   ವಚನ - 975    Search  
 
ಅರ್ಥಪ್ರಾಣಾಭಿಮಾನವ ಕೊಟ್ಟು ಕರ್ತೃ-ಭೃತ್ಯನ ಮಾತಿಗೆ ಮನೆಯ ಬಾಗಿಲಿಗೆ ಹೋಗಿ, `ನನಗೆ ಮಾಡಿ ನೀಡು' ಎಂದು ಉಪಾಧಿಕೆಯ ನುಡಿದರೆ ಅವನ ಕರ್ತೃತನ ಅದೇ ಹಾಳು. ಅದೇನು ಕಾರಣ ಎಂದರೆ, ಕರ್ತನಿದ್ದೆಡೆಗೆ ಭೃತ್ಯ ತಾನೆ ಬಂದು, ದೀರ್ಘದಂಡ ನಮಸ್ಕಾರ ಮಾಡಿ, ಅಷ್ಟವಿಧಾರ್ಚನೆ ಷೋಡಶೋಪಚಾರವ ಮಾಡಬಲ್ಲಾತನೆ ಭೃತ್ಯ, ಪರಿಣಾಮಿಸಬಲ್ಲಾತನೆ ಕರ್ತ. ಕೂಡಲಚೆನ್ನಸಂಗಮದೇವರಲ್ಲಿ ಮೀರಿದ ಸಯಸ್ಥಲವಪೂರ್ವ.