ಅರ್ಥೇಷಣ ಪುತ್ರೇಷಣ ದಾರೇಷಣವೆಂಬ
ಈಷಣತ್ರಯಂಗಳನೆ ಬಿಟ್ಟು,
ಮಂಡೆ ಬೋಳಾದ ಬಳಿಕ
ಮರಳಿ ಹೊನ್ನಿಂಗೆರಗಿದಡೆ ಗುರುದ್ರೋಹಿ,
ಹೆಣ್ಣಿಂಗೆರಗಿದಡೆ ಲಿಂಗದ್ರೋಹಿ
ಮಣ್ಣಿಂಗೆರಗಿದಡೆ [ಜಂಗಮದ್ರೋಹಿ],
ಆತ ಪೂರ್ವಾಚಾರಿಯಲ್ಲ.
"ಸ್ಥಾವರಂ ಭಿನ್ನದೋಷೇಣ ವ್ರತಭ್ರಂಶೇನ ಜಂಗಮಃ|
ಉಭಯೊರ್ಭಿನ್ನಭಾವೇನ ನ ಚಾರ್ಚಾ ನ ಚ ವಂದನಂ"||
ಇದು ಕಾರಣ, ಕೂಡಲಚೆನ್ನಸಂಗಯ್ಯನಲ್ಲಿ,
ಬಸವಣ್ಣನೊಬ್ಬನೆ ಭಕ್ತ; ಪ್ರಭುವೆ ಜಂಗಮ