Index   ವಚನ - 991    Search  
 
ಆಚಾರಲಿಂಗಭಕ್ತಿ ಗುರುಲಿಂಗಭಕ್ತಿ ಶಿವಲಿಂಗಭಕ್ತಿ, ಜಂಗಮಲಿಂಗಭಕ್ತಿ ಪ್ರಸಾದಲಿಂಗಭಕ್ತಿ, ಮಹಾಲಿಂಗಭಕ್ತಿ, ಇಂತೀ ಆರು ಸಹಿತ ಆಚಾರ; ಆಚಾರಸಹಿತ ಗುರು, ಗುರುಸಹಿತ ಲಿಂಗ, ಲಿಂಗಸಹಿತ ಜಂಗಮ. ಜಂಗಮಸಹಿತ ಪ್ರಸಾದ, ಪ್ರಸಾದಸಹಿತ ಮಹಾಲಿಂಗ. ಇಂತೀ ಎಲ್ಲ ಸ್ಥಲಗಳು ತಾನಾಗಬಲ್ಲಡೆ ಕೂಡಲಚೆನ್ನಸಂಗಯ್ಯನಲ್ಲಿ ಲಿಂಗೈಕ್ಯವು.