ಆಚಾರಲಿಂಗಮೋಹಿತನಾದಡೆ
ಸಖೀ ಸಹೋದರ ಮೋಹವ ಮರೆಯಬೇಕು.
ಆಚಾರಲಿಂಗಭಕ್ತನಾದಡೆ,
ಪೂರ್ವಾಚಾರವ ನಡೆಯಲಾಗದು.
ಆಚಾರಲಿಂಗಪೂಜಕನಾದಡೆ,
ಅನ್ಯಪೂಜೆಯ ಮಾಡಲಾಗದು.
ಆಚಾರಲಿಂಗವೀರನಾದಡೆ,
ಹಿಡಿದ ವ್ರತನೇಮವ ಬಿಡಲಾಗದು.
ಆಚಾರಲಿಂಗಪ್ರಸಾದಿಯಾದಡೆ,
ಅಶುಚಿಯಾಗಿರಲಾಗದು.
ಆಚಾರಲಿಂಗಪ್ರಾಣಿಯಾದಡೆ,
ಭಕ್ತನಿಂದೆಯ ಕೇಳಲಾಗದು.
ಇದು ಕಾರಣ-ಕೂಡಲಚೆನ್ನಸಂಗಯ್ಯನಲ್ಲಿ
ಈ ಆರುಸಹಿತ ಆಚಾರಲಿಂಗ ಭಕ್ತಿ.
Art
Manuscript
Music
Courtesy:
Transliteration
Ācāraliṅgamōhitanādaḍe
sakhī sahōdara mōhava mareyabēku.
Ācāraliṅgabhaktanādaḍe,
pūrvācārava naḍeyalāgadu.
Ācāraliṅgapūjakanādaḍe,
an'yapūjeya māḍalāgadu.
Ācāraliṅgavīranādaḍe,
hiḍida vratanēmava biḍalāgadu.
Ācāraliṅgaprasādiyādaḍe,
aśuciyāgiralāgadu.
Ācāraliṅgaprāṇiyādaḍe,
bhaktanindeya kēḷalāgadu.
Idu kāraṇa-kūḍalacennasaṅgayyanalli
ī ārusahita ācāraliṅga bhakti.