Index   ವಚನ - 998    Search  
 
ಆತ್ಮನ ನಿಜವನರಿದು ಪರಮಾತ್ಮಲಿಂಗ ತಾನೆಂದರಿದ ಶರಣಂಗೆ ಎಂತಿರ್ದಡಂತೆ ಪೂಜೆ ನೋಡಾ! ಆ ಶರಣ ಭೋಗಿಸಿತ್ತೆಲ್ಲ ಲಿಂಗಾರ್ಪಿತ, ರುಚಿಸಿತ್ತೆಲ್ಲ ಪ್ರಸಾದ, ಆ ಶರಣನರಿದುದೆಲ್ಲ ಪರಬ್ರಹ್ಮ, ನುಡಿದುದೆಲ್ಲ ಪರತತ್ತ್ವ, ಆ ಶರಣ ತಾನೆ ಕೂಡಲಚೆನ್ನಸಂಗಯ್ಯನು.