ಅಣವಮಲ ಮಾಯಾಮಲ
ಕಾರ್ಮಿಕಮಲವೆಂಬ ಮಲತ್ರಯಂಗಳನಳಿದು,
ಸ್ತುತಿ-ನಿಂದಾದಿ,
ಕಾಂಚನ ಲೋಷ್ಠಂಗಳ ಸಮಾನಂಗಂಡು,
ಸಾಲೋಕ್ಯ ಸಾಮೀಪ್ಯ ಸಾರೂಪ್ಯ ಸಾಯುಜ್ಯಾದಿ
ಪದಂಗಳ ಬಯಸದೆ,
ವೇದ ವೇದಾಂತ ತರ್ಕ ವ್ಯಾಕರಣ
ದರ್ಶನ ಸಂಪಾದನೆಗಳ ತೊಲಗಿಸಿ,
ಖ್ಯಾತಿ ಲಾಭದ ಪೂಜೆಗಳ ಬಯಸದೆ
ತತ್ತ್ವನಿರ್ಣಯವನರಿಯದವರೊಳು
ತಾನೆಂಬುದನೆಲ್ಲಿಯೂ ತೋರದೆ;
ಹೊನ್ನು ತನ್ನ ಲೇಸ ತಾನರಿಯದಂತೆ,
ಬೆಲ್ಲ ತನ್ನ ಸಿಹಿಯ ತಾನರಿಯದಂತೆ,
ವಾರಿಶಿಲೆ ಉದಕದೊಳಡಗಿದಂತೆ,
ಪುಷ್ಟದೊಳಗೆ ಪರಿಮಳವಡಗಿದಂತೆ,
ಅಗ್ನಿಯೊಳಗೆ ಕರ್ಪೂರವಡಗಿದಂತೆ,
ಮಹಾಲಿಂಗದಲ್ಲಿ ಲೀಯವಾದುದೆ ಲಿಂಗೈಕ್ಯ ಕಾಣಾ
ಕೂಡಲಚೆನ್ನಸಂಗಮದೇವಾ.
Art
Manuscript
Music
Courtesy:
Transliteration
Aṇavamala māyāmala
kārmikamalavemba malatrayaṅgaḷanaḷidu,
stuti-nindādi,
kān̄cana lōṣṭhaṅgaḷa samānaṅgaṇḍu,
sālōkya sāmīpya sārūpya sāyujyādi
padaṅgaḷa bayasade,
vēda vēdānta tarka vyākaraṇa
darśana sampādanegaḷa tolagisi,
khyāti lābhada pūjegaḷa bayasade
tattvanirṇayavanariyadavaroḷu
tānembudanelliyū tōrade;
honnu tanna lēsa tānariyadante,
bella tanna sihiya tānariyadante,
vāriśile udakadoḷaḍagidante,
puṣṭadoḷage parimaḷavaḍagidante,
agniyoḷage karpūravaḍagidante,
mahāliṅgadalli līyavādude liṅgaikya kāṇā
kūḍalacennasaṅgamadēvā.