Index   ವಚನ - 1011    Search  
 
ಆದಿಯಿಂದತ್ತತ್ತ ನೀನೆ ಅಯ್ಯಾ, ಅನಾದಿಯಿಂದತ್ತತ್ತ ನೀನೆ ಅಯ್ಯಾ. ಈ ಎರಡನೂ ಮೀರಿದ ಅತ್ಯತಿಷ್ಠದ್ದಶಾಂಗುಲನಾದೆಯಯ್ಯಾ. `ಚತುರ್ಯುಗ ಸಹಸ್ರಾಣಿ' ಎಂಬ ಸಂಖ್ಯೆ ಯುಗಂಗಳ ಪವಣಿಸದಂದು ಕೆಸರುಗಲ್ಲನಿಕ್ಕಿ ಧರೆ ಮೇರುವ ನೆಲೆಗೊಳಿಸಿ ಅಂಡಜ ಉತ್ಪತ್ಯವಾಗದಂದು ಆತನಂತುವ ನೀನೆ ಬಲ್ಲೆ ನಿನ್ನಂತುವನಾತನೆ ಬಲ್ಲ. ನಿಮ್ಮಿಬ್ಬರ ಮಹಿಮೆಯ ನಾನೆತ್ತ ಬಲ್ಲೆನಯ್ಯಾ ಕೂಡಲಚೆನ್ನಸಂಗಮದೇವಾ.