Index   ವಚನ - 1012    Search  
 
ಆದಿಲಿಂಗ, ಅನಾದಿ ಶರಣ ಎಂಬುದು ತನ್ನಿಂದ ತಾನಾಯಿತ್ತು ಕೇಳಿರಣ್ಣಾ; ಆದಿ ಕಾಯ, ಅನಾದಿ ಪ್ರಾಣ ಎಂಬ ಉಭಯದ ಭೇದವ ತಿಳಿದು ವಿಚಾರಿಸಿ ನೋಡಿರಣ್ಣಾ. ಅನಾದಿಯ ಪ್ರಸಾದ ಆದಿಗೆ ಸಲುವುದು. "ಅನಾದಿ ಜಂಗಮಶ್ಚೈವ ಆದಿಲಿಂಗಸ್ಥಲಂ ಭವೇತ್‌| ಅನಾದೇಸ್ತು ವಿರೋಧೇನ ಇಷ್ಟೋಚ್ಛಿಷ್ಟಂ ತು ಕಿಲ್ಬಿಷಮ್"|| ಇದನರಿದು ಪ್ರಾಣಪ್ರಸಾದ ವಿರೋಧವಾಗಿ ಪಿಂಡಪ್ರಸಾದವ ಕೊಂಡಡೆ ಕಿಲ್ಬಿಷ ನೋಡಾ ಕೂಡಲಚೆನ್ನಸಂಗಮದೇವಾ.