Index   ವಚನ - 1038    Search  
 
ಇಷ್ಟಲಿಂಗಮುಖದಲ್ಲಿ ಶರೀರವರ್ಪಿತ, ಪ್ರಾಣಲಿಂಗಮುಖದಲ್ಲಿ ಮನವರ್ಪಿತ, ಭಾವಲಿಂಗಮುಖದಲ್ಲಿ ಪ್ರಾಣವರ್ಪಿತ.- ಇಂತೀ ತ್ರಿವಿಧಾರ್ಪಣವಾದಡೆ, ಮಹಾಘನಲಿಂಗದಲ್ಲಿ ಸಮರಸೈಕ್ಯ, ಕೂಡಲಚೆನ್ನಸಂಗಮದೇವಾ.