ಇಷ್ಟಲಿಂಗ ಸಂಬಂಧವಾದ ಬಳಿಕ
ಕಾಯಗುಣ ಕೆಟ್ಟು
ಲಿಂಗಕಾಯವಾಯಿತ್ತು.
ಪ್ರಾಣಲಿಂಗ ಸಂಬಂಧವಾದ ಬಳಿಕ
ಕರಣಗುಣ
ಕೆಟ್ಟು ಲಿಂಗಕರಣಂಗಳಾದುವು.
ಭಾವಲಿಂಗ ಸಂಬಂಧವಾದ ಬಳಿಕ
ಇಂದ್ರಿಯಗುಣ ಕೆಟ್ಟು
ಲಿಂಗೇಂದ್ರಿಯಗಳಾದುವು.
ಇದು ಕಾರಣ, ಶರಣಂಗೆ ಬೇರೆ ಲಿಂಗವಿಲ್ಲ, ಬೇರೆ ಅಂಗವಿಲ್ಲ.
ಅರ್ಪಿತ ಅನರ್ಪಿತವೆಂಬ ಉಭಯ ಶಂಕೆ ಹಿಂಗಿತ್ತು,
ಕೂಡಲಚೆನ್ನಸಂಗಯ್ಯಾ ನಿನ್ನೊಳಡಗಿದ ನಿಜೈಕ್ಯಂಗೆ.