Index   ವಚನ - 1055    Search  
 
ಉಭಯ ತನುಗುಣವಳಿದಲ್ಲದೆ ಅರಿವಿನಾಚಾರವಳವಡದು. ಅರಿವಿನಾಚಾರ ಅಳವಟ್ಟಲ್ಲದೆ ಲಿಂಗದ ಬೆಳಗು ದೊರೆಕೊಳ್ಳದು, ಲಿಂಗದ ಬೆಳಗು ದೊರೆಕೊಂಡಲ್ಲದೆ ಕೂಡಲಚೆನ್ನಸಂಗಯ್ಯನಲ್ಲಿ ಪರಿಣಾಮ ದೊರೆಕೊಳ್ಳದು.