ಉರಿಯ ಸೀರೆಯನುಟ್ಟು,
ಕಡೆಸೆರಗ ಬಿಡುಬೀಸಿ,
ಮಡದಿ ತನ್ನ ಕೆಳದಿಯರನೊಡಗೊಂಡು ಆಡುತ್ತಿರೆ,
ಪತಿ ಬಂದು ಮುಡಿಯ
ಹಿಡಿದು ಸೀರೆಯನುಗಿಯೆ,
ಮಡದಿಯೊಡಗೂಡುತ್ತಿರೆ;
ಸಮರಸದಲ್ಲಿ ಸತಿಯಳಿದು ಪತಿಯಾಗಿ,
ಪತಿಯಳಿದು ನಿಃಪತಿಯಾಗಿ,
ಸತಿ ಪತಿ ನಿಃಪತಿ- ಎಂಬ ತ್ರಿವಿಧವು ಏಕಾರ್ಥವಾದ
ಕೂಡಲಚೆನ್ನಸಂಗಯ್ಯನಲ್ಲಿ,
ಬಸವಣ್ಣನ ಪಾದಕ್ಕೆ ನಮೋ ನಮೋ ಎನುತಿರ್ದೆನು.
Art
Manuscript
Music
Courtesy:
Transliteration
Uriya sīreyanuṭṭu,
kaḍeseraga biḍubīsi,
maḍadi tanna keḷadiyaranoḍagoṇḍu āḍuttire,
pati bandu muḍiya
hiḍidu sīreyanugiye,
maḍadiyoḍagūḍuttire;
samarasadalli satiyaḷidu patiyāgi,
patiyaḷidu niḥpatiyāgi,
sati pati niḥpati- emba trividhavu ēkārthavāda
kūḍalacennasaṅgayyanalli,
basavaṇṇana pādakke namō namō enutirdenu.