Index   ವಚನ - 1060    Search  
 
ಊರ ಮುಂದೆ ಶ್ವಾನನ ಕಾಣಬಹುದಲ್ಲದೆ ಸಿಂಹವ ಕಾಣಬಾರದು. ನದಿಯ ಮುಂದೆ ಬಕನ ಕಾಣಬಹುದಲ್ಲದೆ ಹಂಸನ ಕಾಣಬಾರದು. ಪಸರದೊಳಗೆ ಗಾಜಿನ ಮಣಿಯ ಕಾಣಬಹುದಲ್ಲದೆ ರತ್ನವ ಕಾಣಬಾರದು. ಧರೆಯ ಮೇಲೆ ವೇಷಧಾರಿಗಳ ಕಾಣಬಹುದಲ್ಲದೆ [ಶಿವ]ಜ್ಞಾನಿಗಳ ಕಾಣಬಾರದು, ಕೂಡಲಚೆನ್ನಸಂಗಮದೇವಾ.