Index   ವಚನ - 1065    Search  
 
ಎನಗಿಲ್ಲದ ಘನವನೇರಿಸಿ ನುಡಿದಡೆ ಅದು ನಿಮ್ಮ ಲೀಲೆ, ನಾನದನು ಬೇಕೆನ್ನೆ ಬೇಡನ್ನೆ ಅದಂತಿರಲಿ. ನಿಮ್ಮ ಶ್ರೀ ಪಾದದ ಕೃಪೆಯಿಂದ ನಿಮ್ಮ ನಿಲವನರಿದೆನು. ಕೂಡಲಚೆನ್ನಸಂಗಮದೇವಾ, ಎನಗೊಮ್ಮೆ ಬಸವಣ್ಣನ ಪರಿಯನರುಹಾ ಪ್ರಭುವೆ.