ಎನ್ನ ಸದ್ಗರುಸ್ವಾಮಿ ಎನಗೆ
ಕರುಣಿಸಿದ ಕಾರುಣ್ಯವ
ನಾನೇನೆಂದುಪಮಿಸುವೆನಯ್ಯಾ?
ಗುರುಲಿಂಗವು ಸಾಕ್ಷಾತ್ ಪರಶಿವನಿಂದ ವಿಶೇಷವು!
ಜ್ಯೋತಿಯಲೊದಗಿದ ಜ್ಯೋತಿಯಂತಾಯಿತ್ತು,
ದರ್ಪಣದೊಳಗಣ ಪ್ರತಿಬಿಂಬದಂತಾಯಿತ್ತು,
ಪದಕದೊಳಗಿರಿಸಿದ ರತ್ನದಂತಾಯಿತ್ತು;
ರೂಪದ ನೆಳಲಿನ ಅಂತರಂಗದಂತಾಯಿತ್ತು,
ಕೂಡಲಚೆನ್ನಸಂಗಯ್ಯಾ,
ದರ್ಪಣಕ್ಕೆ ದರ್ಪಣವ ತೋರಿದಂತಾಯಿತ್ತು,
ಎನ್ನ ಸದ್ಗರುವಿನುಪದೇಶವೆನಗಯ್ಯಾ.
Art
Manuscript
Music
Courtesy:
Transliteration
Enna sadgarusvāmi enage
karuṇisida kāruṇyava
nānēnendupamisuvenayyā?
Guruliṅgavu sākṣāt paraśivaninda viśēṣavu!
Jyōtiyalodagida jyōtiyantāyittu,
darpaṇadoḷagaṇa pratibimbadantāyittu,
padakadoḷagirisida ratnadantāyittu;
rūpada neḷalina antaraṅgadantāyittu,
kūḍalacennasaṅgayyā,
darpaṇakke darpaṇava tōridantāyittu,
enna sadgaruvinupadēśavenagayyā.