Index   ವಚನ - 1096    Search  
 
ಒಲ್ಲೆನೆಂದೆಡೆ ಅದೆ ಭಂಗ, ಒಲಿವೆನೆಂದಡೆ ಅದೇ ಭಂಗ. ಒಲ್ಲೆ ಒಲಿವೆನೆಂಬೆರಡು ಅಳಿದು, ತೃಪ್ತನಾದೆನೆಂದಡೆ ಅದೇ ಕೊರತೆ. ಕೂಡಲಚೆನ್ನಸಂಗಯ್ಯ ಭಕ್ತಾಧೀನನಾಗಿ, ಇಲ್ಲಿಗೆ ನಡೆದು ಬಂದ ಬಳಿಕ ಉಪಚಾರ ಉಂಟೆ ಅಯ್ಯಾ?