Index   ವಚನ - 1097    Search  
 
ಒಳಗೆ ಪ್ರಾಣಲಿಂಗ, ಹೊರಗೆ ಅಂಗಲಿಂಗ, ಇದೇನಯ್ಯಾ? ಮನಕೆ ಮನ ನಾಚದು ನಾಚದು. ಎರಡರ ಬಳಿವಿಡಿದು ಮರೆಗೊಂಡಾಡುವುದೇನಯ್ಯಾ? ಈ ಎರಡರ ನಿರ್ಣಯಕ್ಕೆ ಅದು ಒಂದೆ ಎಂದು ಅರಿದರೆ ಅದೇ ಪದ-ಕೂಡಲಚೆನ್ನಸಂಗಮದೇವಾ.