Index   ವಚನ - 1109    Search  
 
ಕಂಗಳಿಗೆ ತೂ….. ಬಾರ ಅಂಗಜೀವಿಗಳ ಕೂಡಿ ನಡೆವನೆ ಶರಣ? ತನ್ನ ಸುಖವನೆ ಸಂತದಲಿ ಅನುಭವವ ಮಾಡುವನಲ್ಲದೆ, ನುಡಿದಂತೆ ನಡೆಯದಿದ್ದವರ ಕಂಡಡೆ ತನ್ನೊಳಗೆ ತಾನೆ ನಗುವ. ಶರಣ [ನಡೆ]ದಡೆ ಅದನಲ್ಲೆಂಬರು ಸಂಸಾರಜೀವಿಗಳು. ಶರಣ ನುಡಿದಡೆ ಅದನಲ್ಲೆಂಬರು ಸಂಸಾರಜೀವಿಗಳು. ಶರಣ ನುಡಿದಡೆ ಅದನಲ್ಲೆಂಬರು ಭವಭಾರಿಜೀವಿಗಳು. …. ಅಲ್ಲೆಂಬುದ ತಾನು ಬಲ್ಲನಾಗಿ ನುಡಿಯ. ಗುಣಮುಗ್ಧಮೌನಿಯಾಗಿಪ್ಪ ಕೂಡಲಚೆನ್ನಸಂಗಾ ನಿಮ್ಮ ಶರಣ