ಕಂಡ ಚಿತ್ತ ವಸ್ತುವಿನಲ್ಲಿ ಮಗ್ನವಾದ ಮತ್ತೆ
ಸಂಸಾರ ವಿಷಯಕ್ಕೆ ಮತ್ತನಪ್ಪುದೆ?
ಮತ್ತೆ ಭಕ್ತರ ಗೃಹ, ರಾಜದ್ವಾರದ ತಪ್ಪಲ ಕಾಯ್ವುದೆ?
ಆ ಚಿತ್ತ ತೊಟ್ಟುಬಿಟ್ಟ ಹಣ್ಣು,
ಕೆಟ್ಟುಸತ್ತ ಬಿದಿರು
ದೃಷ್ಟನಷ್ಟವಾದ ಅಂಗಕ್ಕೆ
ಮತ್ತೆ ಬಪ್ಪುದೆ, ಪುನರಪಿಯಾಗಿ?
ಇದು ನಿಶ್ಚಯ ನಿಜಲಿಂಗಾಂಗ
ನಿರ್ಲೇಪನ ಹೊಲಬು.
ಜಗದ ಮೊತ್ತದವನಲ್ಲ, ನಿಷ್ಕಳಂಕ,
ಕೂಡಲಚೆನ್ನಸಂಗಮದೇವ ತಾನಾದ ಶರಣ.
Art
Manuscript
Music
Courtesy:
Transliteration
Kaṇḍa citta vastuvinalli magnavāda matte
sansāra viṣayakke mattanappude?
Matte bhaktara gr̥ha, rājadvārada tappala kāyvude?
Ā citta toṭṭubiṭṭa haṇṇu,
keṭṭusatta bidiru
dr̥ṣṭanaṣṭavāda aṅgakke
matte bappude, punarapiyāgi?
Idu niścaya nijaliṅgāṅga
nirlēpana holabu.
Jagada mottadavanalla, niṣkaḷaṅka,
kūḍalacennasaṅgamadēva tānāda śaraṇa.