Index   ವಚನ - 1121    Search  
 
ಕರುಣಜಲ ವಿನಯಜಲ ಸಮತಾಜಲ. ಕರುಣಜಲವೆ ಗುರುಪಾದೋದಕ, ವಿನಯಜಲವೆ ಲಿಂಗಪಾದೋದಕ, ಸಮತಾಜಲವೆ ಜಂಗಮಪಾದೋದಕ. ಗುರುಪಾದೋದಕದಿಂದ ಸಂಚಿತಕರ್ಮನಾಸ್ತಿ, ಲಿಂಗಪಾದೋದಕದಿಂದ ಪ್ರಾರಬ್ಧಕರ್ಮನಾಸ್ತಿ, ಜಂಗಮಪಾದೋದಕದಿಂದ ಆಗಾಮಿಕರ್ಮನಾಸ್ತಿ. ಇಂತೀ ತ್ರಿವಿಧೋದಕದಲ್ಲಿ ತ್ರಿವಿಧಕರ್ಮನಾಸ್ತಿ, ಇದು ಕಾರಣ- ಕೂಡಲಚೆನ್ನಸಂಗಮದೇವಾ ತ್ರಿವಿಧೋದಕವ ನಿಮ್ಮ ಶರಣನೆ ಬಲ್ಲ.