Index   ವಚನ - 1133    Search  
 
ಕಾಯಕಲ್ಪಿತದಿಂದ ಭೋಗಾದಿ ಭೋಗಂಗಳ ಭೋಗಿಸಬಲ್ಲಡೆ ದೇವಲೋಕವೆ ಸರ್ವತಃ ಸಾಲೋಕ್ಯ ಸಾಮೀಪ್ಯ ಸಾರೂಪ್ಯ ಸಾಯುಜ್ಯ ಇಂತೀ ಚತುರ್ವಿಧವನೆ ಮೀರಿ ಶಿವನ ಶ್ರೀಪಾದದಲ್ಲಿ ಇರಬಲ್ಲಡೆ ಕೈಲಾಸವೆ ಕಲ್ಯಾಣ. ಲಿಂಗವೆ ತಾನು, ತಾನೆ ಲಿಂಗವಾಗಿರಬಲ್ಲ ಅಸಮಯೋಗಿ ಸಿದ್ಧರಾಮಯ್ಯದೇವರ ಶ್ರೀಪಾದದಲ್ಲಿ ಎಂದಿಪ್ಪೆ ಹೇಳಾ ಪ್ರಭುವೆ? ಕೂಡಲಚೆನ್ನಸಂಗಮದೇವಾ.