ಕಾಯಪುರವೆಂಬ ಪಟ್ಟಣದೊಳಗೆ;
ಮನವೆಂಬ ಅರಸು, ತ್ರಿಗುಣವೆಂಬ ಪ್ರಧಾನರು,
ವಶೀಕರಣವೆಂಬ ಸೇನಬೋವ,
ಸಂಚಲವೆಂಬ ತೇಜಿ, ಅಷ್ಟಮದವೆಂಬ ಆನೆ,
ಈರೈದು [ಮನ್ನೆಯ] ನಾಯಕರು,
ಇಪ್ಪತ್ತೈದು ಪ್ರಜೆ,
ನೂರಾನಾಲ್ವತ್ತೆಂಟು ದೇಹವಿಕಾರವೆಂಬ ಪರಿಹಾರ,
ಈ ಸಂಭ್ರಮದಲ್ಲಿ ಮನೋರಾಜ್ಯಂಗೆಯ್ಯುತ್ತಿರಲು-
ಇತ್ತ ಶೂನ್ಯವೆಂಬ ಪಟ್ಟಣದೊಳಗೆ
ಅನಾಮಿಕನೆಂಬ ಲಿಂಗದರಸು,
ಅಜಾತನೆಂಬ ಶರಣ ಪ್ರಧಾನಿ
ಪ್ರಪಂಚವೆಂಬ ದಳ ಮುರಿದು ಮೂವರಾಟ ಕೆಟ್ಟಿತ್ತು,
ಅರಸು ಕೂಡಲಚೆನ್ನಸಂಗಯ್ಯನು,
ಒಲಿದ ಕಾರಣ.
Art
Manuscript
Music
Courtesy:
Transliteration
Kāyapuravemba paṭṭaṇadoḷage;
manavemba arasu, triguṇavemba pradhānaru,
vaśīkaraṇavemba sēnabōva,
san̄calavemba tēji, aṣṭamadavemba āne,
īraidu [manneya] nāyakaru,
ippattaidu praje,
nūrānālvatteṇṭu dēhavikāravemba parihāra,
ī sambhramadalli manōrājyaṅgeyyuttiralu-
itta śūn'yavemba paṭṭaṇadoḷage
anāmikanemba liṅgadarasu,
ajātanemba śaraṇa pradhāni
prapan̄cavemba daḷa muridu mūvarāṭa keṭṭittu,
arasu kūḍalacennasaṅgayyanu,
olida kāraṇa.