Index   ವಚನ - 1138    Search  
 
ಕಾಯ ಬ್ರಹ್ಮಚಾರಿಯಾದಡೇನಯ್ಯಾ, ಆಸೆ ಬ್ರಹ್ಮಚಾರಿಯಾಗದನ್ನಕ್ಕರ? ಶಬ್ದ ಮೌನಿಯಾದಡೇನಯ್ಯಾ, ನೆನಹು ಮೌನಿಯಾಗದನ್ನಕ್ಕರ? ತನು ಬೋಳಾದಡೇನಯ್ಯಾ, ಮನ ಬೋಳಾಗದನ್ನಕ್ಕರ? ಇದು ಕಾರಣ- ಕೂಡಲಚೆನ್ನಸಂಗಯ್ಯಾ ನಿಮ್ಮ ಶರಣಸ್ಥಲವಾರಿಗೆಯೂ ಅಳವಡದು.