Index   ವಚನ - 1153    Search  
 
ಕುಲ ಛಲ ಮೊದಲಾದ ಅಷ್ಟಮದಂಗಳನರಿತು ದಾಸೋಹಕ್ಕೆಡೆಯಾಗಿರಬೇಕು. ಪೃಥುವ್ಯಾದಿ ಅಷ್ಟತನುಮದವೆಂಬ ಮಹಿಮೆಯೊಳಗಿರ್ದು ಲಿಂಗಾವಧಾನಿಯಾಗಿರಬೇಕು. ತೈಲಾಭ್ಯಂಜನ ವಸ್ತ್ರ ಆಭರಣ ಸುಗಂಧದ್ರವ್ಯ ಷಡುರಸಾನ್ನಾದಿ ಸತಿಸಂಗ ಸುಖ ದುಃಖಗಳ ಲಿಂಗಮುಖ ಮುಂತಾಗಿ ಪ್ರಸಾದಭೋಗಿಯಾಗಿರ್ಪುದು. ಯಮ ನಿಯಮಾದಿ ಅಷ್ಟಾಂಗ ಯೋಗದಲ್ಲಿ ನಿರತನಾದಡೇನು? ದಾಸೋಹಕ್ಕೆ ಸ್ವಯವಾಗಿರಬೇಕು. ಗೃಹ ಅರಮನೆ ತೋಟ ಗೋಕುಲ ವಾಹನ ಪರಿಜನ ಕೀರ್ತಿಜನದೊಳಗಿರ್ದು ಶರಣರ ಮರೆದಿರಲಾಗದು. ಇಂದ್ರಾದಿ ದೇವತೆಗಳು ಅಷ್ಟದಿಕ್ಕಿನಲ್ಲಿ ಕರ್ತರಾಗಿ ನಿಮ್ಮ ನಿಜ ಭೃತ್ಯರಾಗಿರ್ದರು. ಇಂತೀ ಅಷ್ಟಸಂಪಾದನೆ ನಾಲ್ವತ್ತೆಂಟರಿಂದ ಕೂಡಲಚೆನ್ನಸಂಗಯ್ಯನ ಶರಣರು ಲೋಕಾಧಿಪತಿಗಳು.