ಕಿರಿದಾದ ಬೀಜದಲ್ಲಿ
ಹಿರಿಯ ತರುವಡಗಿದ ಪರಿಯಂತೆ,
ಕರಗತವಾದ ಕನ್ನಡಿಯಲ್ಲಿ
ಕರಿಗಿರಿಗಳು ತೋರುವ ಪರಿಯಂತೆ,
ಜಗದ್ವ್ಯಾಪಕವಾದ ಪರವಸ್ತುವು
ಖಂಡಿತಾಕಾರಮಾದ ಶರೀರದಲ್ಲಿ
ಅತಿ ಸೂಕ್ಷ್ಮ ಪ್ರಮಾಣದಲ್ಲಿರ್ಪಂತೆ,
ಪರತರಶಿವಲಿಂಗವು ಸದ್ಭಕ್ತರನುದ್ಧರಿಪ ಸದಿಚ್ಛೆಯಿಂದ
ಲಿಂಗಾಕಾರವಾಗಿ ನೆಲೆಗೊಂಡಿರ್ಪುದು.
`ಅಣೋರಣೀಯಾನ್ ಮಹತೋ ಮಹೀಯಾನ್' ಎಂದುದಾಗಿ,
ಪರಬ್ರಹ್ಮರೂಪವಾದ ಲಿಂಗವು,
ಮಹದ್ರೂಪದಿಂದ ಅಖಂಡವಾಗಿಯೂ
ಅಣುರೂಪದಿಂದ ಖಂಡಿತವಾಗಿಯೂ ತೋರುವುದು.
ಕೂಡಲಚೆನ್ನಸಂಗಮದೇವಾ,
ಇದು ನಿಮ್ಮ ದಿವ್ಯಲೀಲೆಯಯ್ಯಾ.
Art
Manuscript
Music
Courtesy:
Transliteration
Kiridāda bījadalli
hiriya taruvaḍagida pariyante,
karagatavāda kannaḍiyalli
karigirigaḷu tōruva pariyante,
jagadvyāpakavāda paravastuvu
khaṇḍitākāramāda śarīradalli
ati sūkṣma pramāṇadallirpante,
parataraśivaliṅgavu sadbhaktaranud'dharipa sadiccheyinda
liṅgākāravāgi nelegoṇḍirpudu.
`Aṇōraṇīyān mahatō mahīyān' endudāgi,
parabrahmarūpavāda liṅgavu,
mahadrūpadinda akhaṇḍavāgiyū
aṇurūpadinda khaṇḍitavāgiyū tōruvudu.
Kūḍalacennasaṅgamadēvā,
idu nim'ma divyalīleyayyā.