ಕೃತಯುಗದಲ್ಲಿ ದೇವರು ದೇವಾಸುರನ ಕೊಲುವಲ್ಲಿ,
ಪ್ರಮಥನೆಂಬ ಗಣೇಶ್ವರನಾಗಿರ್ದನು.
ಗಜಾಸುರನ ಚರ್ಮವ ಬಿಚ್ಚಿ ಅಜಾರಿ ಹೊದೆವಲ್ಲಿ
ಉಗ್ರನೆಂಬ ಗಣೇಶ್ವರನಾಗಿರ್ದನು.
ಅಸುರರ ಶಿರೋಮಾಲೆಯ ಕೊರಳಲ್ಲಿ ಉರದಲ್ಲಿ
ಹಾರವಾಗಿ ಧರಿಸಿ ಜಗಕ್ಕೆ ಜೂಬಾಗಿಪ್ಪಲ್ಲಿ,
ಶಂಕೆಯಿಲ್ಲದೆ ನಿಶ್ಶಂಕನೆಂಬ ಗಣೇಶ್ವರನಾಗಿರ್ದನು.
ಸಮಸ್ತ ದೇವರಿಗೆ ಕರುಣಾಮೃತವ ಸುರಿದು ಸುಖವನಿತ್ತು
ರಕ್ಷಿಸುವಲ್ಲಿ ಶಂಕರನೆಂಬ ಗಣೇಶ್ವರನಾಗಿರ್ದನು.
ಜಾಳಂಧರನೆಂಬ ಅಸುರನ ಕೊಲುವಲ್ಲಿ
ಜಾಣರಿಗೆ ಜಾಣನಾಗಿ ವಿಚಿತ್ರನೆಂಬ ಗಣೇಶ್ವರನಾಗಿರ್ದನು.
ತ್ರೇತಾಯುಗದಲ್ಲಿ ಕಾಳಂಧರದೊಳಗೆ
ಶಿವನು ನಿಜಮಂದಿರವಾಗಿದ್ದಲ್ಲಿ,
ಕಾಲಾಗ್ನಿರುದ್ರನೆಂಬ ಗಣೇಶ್ವರನಾಗಿರ್ದನು.
ಪಿತಾಸುರನೆಂಬ ದೈತ್ಯನ ಕೊಂದು ಜಗವ ರಕ್ಷಿಸುವಲ್ಲಿ,
ಮಾತಾಪಿತನೆಂಬ ಗಣೇಶ್ವರನಾಗಿರ್ದನು.
ತಾಳಾಸುರನೆಂಬ ದೈತ್ಯನ ಕೊಂದು ಜಗವ ರಕ್ಷಿಸಿ
ಸೃಷ್ಟಿಯ ಕಲ್ಪಿಸಿ ಬ್ರಹ್ಮಾಂಡ ಭಾರಮಂ ಧರಿಸುವಲ್ಲಿ,
ತಾಳಸಮ್ಮೇಳನೆಂಬ ಗಣೇಶ್ವರನಾಗಿರ್ದನು.
ಜಲಪ್ರಳಯದಲ್ಲಿ ಜಗನ್ನಾಥನು ಅಳಿಯದೆ ಇಪ್ಪಲ್ಲಿ
ಜನನಮರಣವರ್ಜಿತನೆಂಬ ಗಣೇಶ್ವರನಾಗಿರ್ದನು.
ಜಗವೆಲ್ಲಾ ಶೂನ್ಯವೆಂದಡೆ ನಾನೆ ಹುಟ್ಟಿಸಿದೆನೆಂದು,
ಆದಿಗಣನಾಥನೆಂಬ ಗಣೇಶ್ವರನಾಗಿರ್ದನು.
ಸುರಾಸುರರು ಅಹಂಕಾರದಲ್ಲಿ ಹೆಚ್ಚಿ ಮೇರೆದಪ್ಪಿದಲ್ಲಿ
ಗೂಳಿಯಾಗಿ ಹೋರಿ ಎಲ್ಲರ ತೊತ್ತಳದುಳಿದು,
ಒಕ್ಕಲಿಕ್ಕಿ ಮಿಕ್ಕು ಮೀರಿ
ನಂದಿಮಹಾಕಾಳನೆಂಬ ಗಣೇಶ್ವರನಾಗಿರ್ದನು.
ಉರಿಗಣ್ಣ ತೆರೆದಡೆ ಉರಿದಹವು ಲೋಕಂಗಳೆಂದು
ಜಗವ ಹಿಂದಿಕ್ಕಿಕೊಂಡು ವಂದ್ಯನೆಂಬ ಗಣೇಶ್ವರನಾಗಿರ್ದನು.
ಉಮೆಯ ಕಲ್ಯಾಣದಲ್ಲಿ ಕಾಲಲೋಚನನೆಂಬ
ಗಣೇಶ್ವರನಾಗಿರ್ದನು.
ಅಂಧಕಾಸುರನ ಕೊಲುವಲ್ಲಿ
ನೀಲಲೋಹಿತನೆಂಬ ಗಣೇಶ್ವರನಾಗಿರ್ದನು.
ತ್ರಿಪುರದಹನವ ಮಾಡುವಲ್ಲಿ
ಸ್ಕಂದನೆಂಬ ಗಣೇಶ್ವರನಾಗಿರ್ದನು.
ಬ್ರಹ್ಮಕಪಾಲ ವಿಷ್ಣುಕಂಕಾಳವನಿಕ್ಕುವಲ್ಲಿ ನೀಲಕಂಠನೆಂಬ
ಗಣೇಶ್ವರನಾಗಿರ್ದನು.
ದ್ವಾಪರದಲ್ಲಿ ಲಿಂಗಪ್ರಾಣಸಂಯೋಗವಾಗಿ
ವೃಷಭನೆಂಬ ಗಣೇಶ್ವರನಾಗಿರ್ದನು.
ಇಂತು ನಾಲ್ಕು ಯುಗ, ಹದಿನಾಲ್ಕು ಭುವನಂಗಳು ಮಡಿವಲ್ಲಿ,
ಹುಟ್ಟುವಲ್ಲಿ ನಂದಿಕೇಶ್ವರನೆಂಬ ಗಣೇಶ್ವರನಾಗಿರ್ದನು.
ಕಲಿಯುಗದಲ್ಲಿ ಗುರು ಲಿಂಗ ಜಂಗಮ ಪಾದೋದಕ
ಪ್ರಸಾದ ಪೂರ್ವಾಶ್ರಯವ ಕಳೆದು,
ಲಿಂಗವಾಗಿ ಕುಳಸ್ಥಳವನರಿತು
ಮಹಾಂತ ಕೂಡಲಚೆನ್ನಸಂಗನ ಮಹಾಮನೆಯಲ್ಲಿ,
ಸರ್ವಾಚಾರಸಂಪನ್ನ ಬಸವಣ್ಣನೆಂಬ
ಗಣೇಶ್ವರನಾಗಿರ್ದನು ಕೇಳಾ ಪ್ರಭುವೆ.
Art
Manuscript
Music
Courtesy:
Transliteration
Kr̥tayugadalli dēvaru dēvāsurana koluvalli,
pramathanemba gaṇēśvaranāgirdanu.
Gajāsurana carmava bicci ajāri hodevalli
ugranemba gaṇēśvaranāgirdanu.
Asurara śirōmāleya koraḷalli uradalli
hāravāgi dharisi jagakke jūbāgippalli,
śaṅkeyillade niśśaṅkanemba gaṇēśvaranāgirdanu.
Samasta dēvarige karuṇāmr̥tava suridu sukhavanittu
rakṣisuvalli śaṅkaranemba gaṇēśvaranāgirdanu.
Jāḷandharanemba asurana koluvalli
jāṇarige jāṇanāgi vicitranemba gaṇēśvaranāgirdanu.
Trētāyugadalli kāḷandharadoḷage
Śivanu nijamandiravāgiddalli,
kālāgnirudranemba gaṇēśvaranāgirdanu.
Pitāsuranemba daityana kondu jagava rakṣisuvalli,
mātāpitanemba gaṇēśvaranāgirdanu.
Tāḷāsuranemba daityana kondu jagava rakṣisi
sr̥ṣṭiya kalpisi brahmāṇḍa bhāramaṁ dharisuvalli,
tāḷasam'mēḷanemba gaṇēśvaranāgirdanu.
Jalapraḷayadalli jagannāthanu aḷiyade ippalli
jananamaraṇavarjitanemba gaṇēśvaranāgirdanu.
Jagavellā śūn'yavendaḍe nāne huṭṭisidenendu,
ādigaṇanāthanemba gaṇēśvaranāgirdanu.
Surāsuraru ahaṅkāradalli hecci mēredappidalli
gūḷiyāgi hōri ellara tottaḷaduḷidu,
okkalikki mikku mīri
nandimahākāḷanemba gaṇēśvaranāgirdanu.
Urigaṇṇa teredaḍe uridahavu lōkaṅgaḷendu
jagava hindikkikoṇḍu vandyanemba gaṇēśvaranāgirdanu.
Umeya kalyāṇadalli kālalōcananemba
gaṇēśvaranāgirdanu.
Andhakāsurana koluvalli
nīlalōhitanemba gaṇēśvaranāgirdanu.
Tripuradahanava māḍuvalli
skandanemba gaṇēśvaranāgirdanu.
Brahmakapāla viṣṇukaṅkāḷavanikkuvalli nīlakaṇṭhanemba
gaṇēśvaranāgirdanu.
Dvāparadalli liṅgaprāṇasanyōgavāgi
vr̥ṣabhanemba gaṇēśvaranāgirdanu.
Intu nālku yuga, hadinālku bhuvanaṅgaḷu maḍivalli,
huṭṭuvalli nandikēśvaranemba gaṇēśvaranāgirdanu.
Kaliyugadalli guru liṅga jaṅgama pādōdaka
prasāda pūrvāśrayava kaḷedu,
liṅgavāgi kuḷasthaḷavanaritu
mahānta kūḍalacennasaṅgana mahāmaneyalli,
sarvācārasampanna basavaṇṇanemba
gaṇēśvaranāgirdanu kēḷā prabhuve.