Index   ವಚನ - 1158    Search  
 
ಕೃತಯುಗದಲ್ಲಿ ದೇವಾದಿದೇವರ್ಕಳಿಗೆ ಯುದ್ಧವಾಯಿತ್ತು. ತ್ರೇತಾಯುಗದಲ್ಲಿ ರಾಮರಾವಣರಿಗೆ ಯುದ್ಧವಾಯಿತ್ತು. ದ್ವಾಪರದಲ್ಲಿ ಕೌರವ ಪಾಂಡವರಿಗೆ ಯುದ್ಧವಾಯಿತ್ತು. ಕಲಿಯುಗದಲ್ಲಿ ಮೌರ್ಯ ಕದಂಬರಿಗೆ ಯುದ್ಧವಾಯಿತ್ತು. ಇಂತು ಅನಂತ ಯುಗಂಗಳಲ್ಲಿ ಅನಂತರಿಗೆ ಯುದ್ಧವಾಗುತ್ತಿಹ ಕಾರಣ ಕೂಡಲಚೆನ್ನಸಂಗಯ್ಯಾ, ನಿಮ್ಮ ಶರಣರಿಗೆಯೂ ನಮಗೆಯೂ ಅಂದು ಇಂದು ಮುಂದು ಯುದ್ಧವಿಲ್ಲ.