Index   ವಚನ - 351    Search  
 
ಲಿಂಗವನು ಪುರಾತನರನು ಅನ್ಯರ ಮನೆಯೊಳಯಿಕೆ ಹೋಗಿ ಹೊಗಳುವರು, ತಮ್ಮದೊಂದುದರ ಕಾರಣ. ಲಿಂಗವು ಪುರಾತನರು ಅಲ್ಲಿಗೆ ಬರಬಲ್ಲರೆ? ಅನ್ಯವನೆ ಮರೆದು ನಿಮ್ಮ ನೆನೆವರ ಎನಗೊಮ್ಮೆ ತೋರಾ ಚೆನ್ನಮಲ್ಲಿಕಾರ್ಜುನಾ.