ಗುರುಕಾರುಣ್ಯವ ಪಡೆದೆವೆಂಬರು;
ಒಬ್ಬನಾಗಾದೆಹೆನೆಂಬ, ಒಬ್ಬ ಚೇಗೆಯಾದೆಹೆನೆಂಬ
ಇವರಿಬ್ಬರು ಪಿಂಡಭೋಗಿಗಳು,
ಭಕ್ತಂಗೆ ಈ ಆಗೂ ಇಲ್ಲ, ಈ ಚೇಗೆಯೂ ಇಲ್ಲ.
ಗುರುದ್ರವ್ಯಾವನೊಪ್ಪಿಸಿದನಾಗಿ.
"ಗುರುದ್ರವ್ಯಾಭಿಲಾಷೇಣ ಗುರುದ್ರವ್ಯಸ್ಯ ವಂಚನಂ|
ಯಃ ಕುರ್ಯಾದ್ಗುರೋರ್ಭಕ್ತಃಸ ಭವೇತ್ ಬ್ರಹ್ಮರಾಕ್ಷಸಃ"||
ಎಂದುದಾಗಿ,
ಗುರುದ್ರವ್ಯವಾವುದೆಂದಡೆ;
ದೈಹಿಕದ್ರವ್ಯ, ಭೌತಿಕದ್ರವ್ಯ, ಆತ್ಮದ್ರವ್ಯ,
ಇಂದ್ರಿಯದ್ರವ್ಯ, ಜ್ಞಾನದ್ರವ್ಯ-
ಈ ಪಂಚದ್ರವ್ಯವನು ಉಭಯವಳಿದು
ಷೋಡಶೋಪಚಾರದಲ್ಲಿ ಅರ್ಪಿಸಬಲ್ಲರೆ
ಕೂಡಲಚೆನ್ನಸಂಗಯ್ಯನಲ್ಲಿ ಆತನೆ ಗುರುಭಕ್ತ.
Art
Manuscript
Music
Courtesy:
Transliteration
Gurukāruṇyava paḍedevembaru;
obbanāgādehenemba, obba cēgeyādehenemba
ivaribbaru piṇḍabhōgigaḷu,
bhaktaṅge ī āgū illa, ī cēgeyū illa.
Gurudravyāvanoppisidanāgi.
Gurudravyābhilāṣēṇa gurudravyasya van̄canaṁ|
yaḥ kuryādgurōrbhaktaḥsa bhavēt brahmarākṣasaḥ||
endudāgi,
gurudravyavāvudendaḍe;
daihikadravya, bhautikadravya, ātmadravya,
indriyadravya, jñānadravya-
ī pan̄cadravyavanu ubhayavaḷidu
ṣōḍaśōpacāradalli arpisaballare
kūḍalacennasaṅgayyanalli ātane gurubhakta