ಗುರುಕಾರುಣ್ಯವಿಡಿದು
ಅಂಗದ ಮೇಲೆ ಲಿಂಗವನುಳ್ಳ
ನಿಜವೀರಶೈವ ಸಂಪನ್ನರಾದ
ಗುರುಚರ ಭಕ್ತಿವಿವಾಹದ ಪರಿಯೆಂತೆಂದಡೆ:
ದಾಸಿ, ವೇಸಿ, ವಿಧವೆ, ಪರಸ್ತ್ರೀ, ಬಿಡಸ್ತ್ರೀ ಮೊದಲಾದ
ಹಲವು ಪ್ರಕಾರದ ರಾಸಿಕೂಟದ ಸ್ತ್ರೀಯರ ಬಿಟ್ಟು
ಸತ್ಯಸದಾಚಾರವನುಳ್ಳ ಭಕ್ತಸ್ತ್ರೀಯರ, ಮುತ್ತೈದೆಯ
ಮಗಳಪ್ಪ ಶುದ್ಧ ಕನ್ನಿಕೆಯ, ವಿವಾಹವಾಗುವ ಕಾಲದಲ್ಲಿ,
ಭಕ್ತಗೃಹವಂ ಶೃಂಗರಿಸಿ ಭಕ್ತಿಪದಾರ್ಥಂಗಳ ಕೂಡಿಸಿ
ಭಕ್ತಿ ಸಂಭ್ರಮದಿಂದ ಗುಡಿಕಟ್ಟಿ
ವಿವಾಹೋತ್ಸವಕ್ಕೆ ನೆರೆದ ಭಕ್ತಜಂಗಮಕ್ಕೆ
ನಮಸ್ಕರಿಸಿ ಮೂರ್ತಿಗೊಳಿಸುತ್ತ
ವಿಭೂತಿ ವೀಳಯವಂ ತಂದಿರಿಸಿ ಬಿನ್ನೈಸಿ ಅವರಾಜ್ಞೆಯಂ ಕೈಕೊಂಡು
ಶೋಭನವೇಳುತ್ತ, ಮಂಗಳ ಮಜ್ಜನವಂ ಮಾಡಿ
ಅಂಗವಸ್ತ್ರ ಲಿಂಗವಸ್ತ್ರಂಗಳಿಂ ಶೃಂಗರಿಸಿ
ವಿಭೂತಿಯಂ ಧರಿಸಿ, ರುದ್ರಾಕ್ಷೆಯಂ ತೊಟ್ಟು
ದಿವ್ಯಾಭರಣವನ್ನಿಟ್ಟು ಆಸನವಿತ್ತು ಕುಳ್ಳಿರಿಸಿ,
ಭಕ್ತಾಂಗನೆಯರೆಲ್ಲ ನೆರೆದು ಶೋಭನವಂ ಪಾಡುತ್ತ,
ಭವಿಶೈವಕೃತಕಶಾಸ್ತ್ರವಿಡಿದು ಮಾಡುವ
ಪಂಚಸೂತಕ ಪಾತಕಯುಕ್ತವಾದ
ಪಂಚಾಂಗ ಕರ್ಮ ಸಂಕಲ್ಪಗಳಂ ಅತಿಗಳೆದು
ಅಂಗಲಿಂಗಸಂಬಂಧವನುಳ್ಳ ಪಂಚಾಚಾರಯುಕ್ತರಾದ
ನಿಜವೀರಶೈವಸಂಪನ್ನರಾದ ಭಕ್ತಿವಿವಾಹಕ್ಕೆ ಮೊದಲಾದ
ಗುರುವಾಜ್ಞೆವಿಡಿದು ಉಭಯವಂ ಕೈಗೂಡಿ
ಸತಿಪತಿ ಭಾವವನುಳ್ಳ ಸತ್ಯವ್ರತವ ತಪ್ಪದಿರಿ ಎಂದು
ಭಕ್ತಾಜ್ಞೆಯಲ್ಲಿ ಭಸಿತವನಿಡಿಸಿ
ಗುರುಲಿಂಗ ಜಂಗಮವೆಂಬ ಏಕ ಪ್ರಸಾದವನೂಡಿ,
ಇಂತು ಗುರು ಚರ ಪರ ಮೊದಲಾದ ಭಕ್ತಗಣ ಸಾಕ್ಷಿಯಾಗಿ
ಭಕ್ತಿವಿವಾಹದ ಭಕ್ತಾರಾಧ್ಯರುಗಳ
ನಿಷೇಧವ ಮಾಡಿ ನಿಂದಿಸಿದವಂಗೆ
ಗುರುವಿಲ್ಲ ಲಿಂಗವಿಲ್ಲ ಜಂಗಮವಿಲ್ಲ,
ಪಾದೋದಕವಿಲ್ಲ, ಪ್ರಸಾದವಿಲ್ಲ,
ಅವ ಭಕ್ತಾಚಾರಕ್ಕೆ ಸಲ್ಲನು.
ಇಂತಪ್ಪ ಭಕ್ತಿ ಕಲ್ಯಾಣಯುಕ್ತವಾದ
ಭಕ್ತರಾದ್ಯರ ನಿಷೇಧವ ಮಾಡಿ
ನಿಂದಿಸಿದವಂಗೆ ಇಪ್ಪತ್ತೆಂಟು ಕೋಟಿ ನರಕ ತಪ್ಪದು
ಕಾಣಾ ಕೂಡಲಚೆನ್ನಸಂಗಯ್ಯ.
Art
Manuscript
Music
Courtesy:
Transliteration
Gurukāruṇyaviḍidu
aṅgada mēle liṅgavanuḷḷa
nijavīraśaiva sampannarāda
gurucara bhaktivivāhada pariyentendaḍe:
Dāsi, vēsi, vidhave, parastrī, biḍastrī modalāda
halavu prakārada rāsikūṭada strīyara biṭṭu
satyasadācāravanuḷḷa bhaktastrīyara, muttaideya
magaḷappa śud'dha kannikeya, vivāhavāguva kāladalli,
bhaktagr̥havaṁ śr̥ṅgarisi bhaktipadārthaṅgaḷa kūḍisi
bhakti sambhramadinda guḍikaṭṭi
vivāhōtsavakke nereda bhaktajaṅgamakke
namaskarisi mūrtigoḷisutta
Vibhūti vīḷayavaṁ tandirisi binnaisi avarājñeyaṁ kaikoṇḍu
śōbhanavēḷutta, maṅgaḷa majjanavaṁ māḍi
aṅgavastra liṅgavastraṅgaḷiṁ śr̥ṅgarisi
vibhūtiyaṁ dharisi, rudrākṣeyaṁ toṭṭu
divyābharaṇavanniṭṭu āsanavittu kuḷḷirisi,
bhaktāṅganeyarella neredu śōbhanavaṁ pāḍutta,
bhaviśaivakr̥takaśāstraviḍidu māḍuva
pan̄casūtaka pātakayuktavāda
pan̄cāṅga karma saṅkalpagaḷaṁ atigaḷedu
aṅgaliṅgasambandhavanuḷḷa pan̄cācārayuktarāda
nijavīraśaivasampannarāda bhaktivivāhakke modalāda
Guruvājñeviḍidu ubhayavaṁ kaigūḍi
satipati bhāvavanuḷḷa satyavratava tappadiri endu
bhaktājñeyalli bhasitavaniḍisi
guruliṅga jaṅgamavemba ēka prasādavanūḍi,
intu guru cara para modalāda bhaktagaṇa sākṣiyāgi
bhaktivivāhada bhaktārādhyarugaḷa
niṣēdhava māḍi nindisidavaṅge
guruvilla liṅgavilla jaṅgamavilla,
pādōdakavilla, prasādavilla,
ava bhaktācārakke sallanu.
Intappa bhakti kalyāṇayuktavāda
bhaktarādyara niṣēdhava māḍi
nindisidavaṅge ippatteṇṭu kōṭi naraka tappadu
kāṇā kūḍalacennasaṅgayya.