ಗುರು ಲಿಂಗ ಜಂಗಮ ಪಾದೋದಕ ಪ್ರಸಾದ
ವಿಭೂತಿ ರುದ್ರಾಕ್ಷಿ [ಮಂತ್ರ] ಒಂದೇಯೆಂಬ
ಸುರೆಯ ಭುಂಜಕರ ಮಾತ ಕೇಳಲಾಗದು.
ಅದೇನು ಕಾರಣವೆಂದರೆ;
ಪಾದವಿಡಿದು ಅವಧರಿಸಿಕೊಂಡುದೆ ಲಿಂಗ,
ಪಾದವಿಡಿಯದಿದ್ದರೆ ಕಲ್ಲು,
ಪಾದವಿಡಿದಾತನೆ ಜಂಗಮ,
ಪಾದವಿಡಿಯದಾತನೆ ಮಾನುಷ.
ಭಯ ಭೀತಿ ಭೃತ್ಯಾಚಾರದಿಂದ
ಧೀರ್ಘದಂಡ ನಮಸ್ಕಾರವಮಾಡಿ
ಕೊಂಡರೆ ಪಾದೋದಕ ಪ್ರಸಾದ,
ಕೊಳ್ಳದುದೆ ಉದಕ ಓಗರ.
ಚಿತ್ತ ಶುದ್ಧವಾಗಿ ಧರಿಸಿಕೊಂಡುದೆ ವಿಭೂತಿ ರುದ್ರಾಕ್ಷಿ,
ಶುದ್ಧವಿಲ್ಲದುದೆ ಬೂದಿ, ಮರನ ಮಣಿ,
ಕೂಡಲಚೆನ್ನಸಂಗಮದೇವ ನೀ ಸಾಕ್ಷಿಯಾಗಿ.
Art
Manuscript
Music
Courtesy:
Transliteration
Guru liṅga jaṅgama pādōdaka prasāda
vibhūti rudrākṣi [mantra] ondēyemba
sureya bhun̄jakara māta kēḷalāgadu.
Adēnu kāraṇavendare;
pādaviḍidu avadharisikoṇḍude liṅga,
pādaviḍiyadiddare kallu,
pādaviḍidātane jaṅgama,
pādaviḍiyadātane mānuṣa.
Bhaya bhīti bhr̥tyācāradinda
dhīrghadaṇḍa namaskāravamāḍi
koṇḍare pādōdaka prasāda,
koḷḷadude udaka ōgara.
Citta śud'dhavāgi dharisikoṇḍude vibhūti rudrākṣi,
śud'dhavilladude būdi, marana maṇi,
kūḍalacennasaṅgamadēva nī sākṣiyāgi.