ಗುರುಲಿಂಗ, ಶಿವಲಿಂಗ, ಜಂಗಮಲಿಂಗ,
ಪ್ರಸಾದಲಿಂಗವೆಂಬ
ಅಪಸ್ಮಾರಿಗಳ ಮಾತ ಕೇಳಾಗದು.
ಅದೆಂತೆಂದಡೆ;
ಅಂಗದ ಮೇಲೆ ಒಬ್ಬ ಗಂಡ,
ಮನೆಯೊಳಗೆ ಒಬ್ಬ ಗಂಡ,
ಹಿತ್ತಲೊಳಗೊಬ್ಬ ಗಂಡ,
ಮುಂಚೆಯಲೊಬ್ಬ ಗಂಡ-
ಇಂತೀ ಚತುವಿರ್ಧ ಗಂಡರು ಎಂಬ ಸತಿಯರ
ಲೋಕದವರು ಮೆಟ್ಟಿ ಮೂಗಕೊಯ್ಯದೆ ಮಾಬರೆ?
ಕೂಡಲಚೆನ್ನಸಂಗಮದೇವಾ
ಪ್ರಾಣಲಿಂಗವಿರ್ದುದ ಎತ್ತಲೆಂದರಿಯರು.
Art
Manuscript
Music
Courtesy:
Transliteration
Guruliṅga, śivaliṅga, jaṅgamaliṅga,
prasādaliṅgavemba
apasmārigaḷa māta kēḷāgadu.
Adentendaḍe;
aṅgada mēle obba gaṇḍa,
maneyoḷage obba gaṇḍa,
hittaloḷagobba gaṇḍa,
mun̄ceyalobba gaṇḍa-
intī catuvirdha gaṇḍaru emba satiyara
lōkadavaru meṭṭi mūgakoyyade mābare?
Kūḍalacennasaṅgamadēvā
prāṇaliṅgavirduda ettalendariyaru.