Index   ವಚನ - 1204    Search  
 
ಗುರುವ ಬಿಟ್ಟವಂಗೆ ಲಿಂಗವಿಲ್ಲ, ತನುವಿರಹಿತವಾಗಿ ಪ್ರಾಣವಿಲ್ಲ, ಕಂಗಳುವಿರಹಿತವಾಗಿ ನೋಡಲಿಲ್ಲ, ಸತ್ಯವಿರಹಿತವಾಗಿ ಭಕ್ತಿಯಿಲ್ಲ. ಈ ಭೇದಕಸ್ಥಲವನರಿಯದಿದ್ದಡೆ ಭಕ್ತಜಂಗಮವನಲ್ಲ ಕಾಣಾ ಕೂಡಲಚೆನ್ನಸಂಗಮದೇವಾ.