Index   ವಚನ - 1203    Search  
 
ಗುರುವಪ್ಪುದರಿದು, ಶಿಷ್ಯನಪ್ಪುದರಿದು, ಗುರುಶಿಷ್ಯಸಂಬಂಧವಾರಿಗೆಯೂ ಅಳವಡದಾಗಿ. ಗುರುವಾದಾತ ಸೊನ್ನಗಾರನಾಗಬೇಕು. ಶಿಷ್ಯನಾದಾತ ಬೆವಹಾರಿಯಾಗಬೇಕು. ಇದು ಕಾರಣ-ಕೂಡಲಚೆನ್ನಸಂಗಯ್ಯಾ ಇಂತಹ ಗುರುಶಿಷ್ಯಸಂಬಂಧವಪೂರ್ವ.