Index   ವಚನ - 1211    Search  
 
ಗುರುವಿನ ಗುರುವಿನ ಕೈಯಲ್ಲಿ ಶಿಷ್ಯರ ಶಿಷ್ಯ ಪಾದಾರ್ಚನೆಯ ಮಾಡಿಸಿಕೊಂಬುದ ಕಂಡು ಎನ್ನ ಮನ ಬೆರಗಾಯಿತ್ತು! ಮುಂದು ಹಿಂದಾಯಿತ್ತು, ಹಿಂದು ಮುಂದಾಯಿತ್ತು! ಕೂಡಲಚೆನ್ನಸಂಗಮದೇವಾ, ನಿಮ್ಮ ಗುರುಶಿಷ್ಯರ ಸಂಬಂಧ ಎನಗೆ ವಿಪರೀತವಾಯಿತ್ತು.