Index   ವಚನ - 1214    Search  
 
ಗುರುವಿಂದಾಯಿತ್ತೆಂಬೆನೆ? ಗುರುವಿಂದಾಗದು. ಲಿಂಗದಿಂದಾಯಿತ್ತೆಂಬೆನೆ? ಲಿಂಗದಿಂದಾಗದು. ಜಂಗಮದಿಂದಾಯಿತ್ತೆಂಬೆನೆ? ಜಂಗಮದಿಂದಾಗದು. ಪಾದೋದಕದಿಂದಾಯಿತ್ತೆಂಬೆನೆ? ಪಾದೋದಕದಿಂದಾಗದು. ಪ್ರಸಾದದಿಂದಾಯಿತ್ತೆಂಬೆನೆ? ಪ್ರಸಾದದಿಂದಾಗದು. ತನ್ನಿಂದ ಅಹುದು, ತನ್ನಿಂದ ಹೋಹುದು ಕಾಣಾ ಕೂಡಲಚೆನ್ನಸಂಗಮದೇವಾ.