Index   ವಚನ - 1231    Search  
 
ಘಟದೊಳಗಿದ್ದ ಪದಾರ್ಥವು, ಆ ಘಟದ ಹೊರಗೆ ಉರಿಯ ಹತ್ತಿಸಿದಲ್ಲದೆ ಪರಿಪಕ್ವವಾಗದು. ಹಾಗೆ-ಅಂತರಂಗದಲಿರ್ದ ಚಿದ್ವಸ್ತು ಸಂಸ್ಕಾರಬಲದಿಂದ ಹೊರಹೊರಟಲ್ಲದೆ, ಅಂತರಂಗದಲಿರ್ದ ಭವರೋಗ ಮಾಣದು. ಇದುಕಾರಣ, ಕೂಡಲಚೆನ್ನಸಂಗಮದೇವಾ. ಅರ್ಚನ ಅರ್ಪಣ ಅನುಭಾವಾದಿಗಳಿಂದ ನೀವು ಪ್ರಕಟಗೊಳ್ಳುವಿರಾಗಿ.