ಗೋವಿನ ಹೊಟ್ಟೆಯಲ್ಲಿ ಘೃತವಿದ್ದಡೇನೊ
ಆ ಗೋವು ದಿನದಿನಕ್ಕೆ ಪುಷ್ಟವಾಗಬಲ್ಲುದೆ?
ಅದು ಕಾರಣ-ಆ ಗೋವ ಪೋಷಿಸಿ ಕರೆದು ಕಾಸಿ,
ಘೃತವ ಮಾಡಿ ಆ ಗೋವಿಂಗೆ ಕುಡಿಯಲೆರೆದಡೆ
ಆ ಗೋವು ದಿನದಿನಕ್ಕೆ ಪುಷ್ಟವಹುದು.
ಹಾಂಗೆ, ತನ್ನಲ್ಲಿ ವಸ್ತುವಿದ್ದಡೇನೊ?
ವಸ್ತುವ ಗುರುಮುಖದಿಂದ ಕರಸ್ಥಲಕ್ಕೆ ಪಡೆದು,
ಸತ್ಕ್ರಿಯೆಯಿಂದ ಪ್ರಾಣಕ್ಕೆ ವೇಧಿಸಿದಲ್ಲದೆ ಪ್ರಾಣಲಿಂಗವಾಗದು.
ಕೂಡಲಚೆನ್ನಸಂಗಯ್ಯನಲ್ಲಿ,
ಇಷ್ಟಲಿಂಗವ ಸತ್ಕ್ರಿಯೆಯಿಂದ ಪ್ರಾಣಕ್ಕೆ ವೇಧಿಸಿ,
ತಾನೆಂಬ ಅನಿಷ್ಟವ ತೊಲಗಿಸಿದಲ್ಲದೆ
ಪ್ರಾಣಲಿಂಗಸಂಬಂಧವಾಗಬಾರದು.
Art
Manuscript
Music
Courtesy:
Transliteration
Gōvina hoṭṭeyalli ghr̥taviddaḍēno
ā gōvu dinadinakke puṣṭavāgaballude?
Adu kāraṇa-ā gōva pōṣisi karedu kāsi,
ghr̥tava māḍi ā gōviṅge kuḍiyaleredaḍe
ā gōvu dinadinakke puṣṭavahudu.
Hāṅge, tannalli vastuviddaḍēno?
Vastuva gurumukhadinda karasthalakke paḍedu,
satkriyeyinda prāṇakke vēdhisidallade prāṇaliṅgavāgadu.
Kūḍalacennasaṅgayyanalli,
iṣṭaliṅgava satkriyeyinda prāṇakke vēdhisi,
tānemba aniṣṭava tolagisidallade
prāṇaliṅgasambandhavāgabāradu.