Index   ವಚನ - 1242    Search  
 
ಜಂಗಮಭಕ್ತನು ಗಂಡನುಳ್ಳ ಸಜ್ಜನಸತಿಯಂತಿರಬೇಕು. ಹೊಯ್ದಡೆ ಬಯ್ದಡೆ ಜರಿದಡೆ ಕೋಪಿಸಿದಡೆ ನಿಂದಿಸಿದಡೆ ಅಳಲಿಸಿದಡೆ ಬಳಲಿಸಿದಡೆ ಹುರುಡಿಸಿದಡೆ- ಇಂತಿವು ಮೊದಲಾಗಿ ಏನೊಂದು ಮಾಡಿದಡೆಯೂ ಮನದಲ್ಲಿ ಮರುಗಿದಡೆ, ಇದಿರುತ್ತರ ಕೊಟ್ಟಡೆ ಆ ಸಜ್ಜನಸತಿಯ ಗುಣಕ್ಕೆ ಕೊರತೆಯಹುದು. ಆ ಪುರುಷನೆ ದೈವವೆಂದರಿವುದು, ಅವನ ಗುಣವ ನೋಡದೆ, ತನ್ನ ಗುಣವ ಬಿಡದೆ ಇದ್ದಡೆ ಪತಿವ್ರತೆ ಎನಿಸುವಳು, ಮೇಲೆ ಮುಕ್ತಿಯಪ್ಪುದು. ಈ ಪತಿವ್ರತೆಯಂತೆ ಜಂಗಮದಾಸೋಹವ ಮಾಡುವ ಭಕ್ತರು ಜಂಗಮ ಮಾಡಿದಂತೆ ಮಾಡಿಸಿಕೊಂಬುದು, ನಿರುತ್ತರದಲ್ಲಿಪ್ಪುದು. ಹೀಂಗಿರದೆ, ಜಂಗಮಕ್ಕೆ ಇದಿರುತ್ತರವ ಕೊಟ್ಟಡೆ, ಅವರಿಗೆ ಮಾಡುವ ಭಕ್ತಿಯ ಸಾಮಾನ್ಯವ ಮಾಡಿದಡೆ ತಾ ಹಿಂದೆ ಮಾಡಿದ ಭಕ್ತಿಯೆಲ್ಲ ಬೆಂದುಹೋಗಿ ಮುಂದೆ ನರಕಕ್ಕೆ ಗುರಿಯಹುದು ತಪ್ಪದು ಕಾಣಾ, ಕೂಡಲಚೆನ್ನಸಂಗಮದೇವಾ.