ಜ್ಞಾನ ಉಪಾಸ್ಥೆ ಪಶುಜ್ಞಾನವ
ಬಲ್ಲ ಮಾತ ನುಡಿಯಲಾಗದು,
ಉತ್ಪತ್ತಿ ಸ್ಥಿತಿ ಲಯವೆಂಬ ಕಾಲತ್ರಯದಲ್ಲಿ ಬೀಳದೆ,
ಜಾಗ್ರತ ಸ್ವಪ್ನ ಸುಷುಪ್ತಿಯೆಂಬ
ವ್ಯಾಪಾರತ್ರಯದ ಅನುಮಾನವರಿತು,
ಆಧ್ಯಾತ್ಮಿಕ ಆಧಿಭೌತಿಕ ಆಧಿದೈವಿಕವೆಂಬ
ತಾಪತ್ರಯವಂ ಕೊಳಲಾಗದೆ,
ಅರ್ಥೇಷಣ ಪುತ್ರೇಷಣ ದಾರೇಷಣವೆಂಬ
ಈಷಣತ್ರಯದ ಭ್ರಾಂತಿಯಡಗಿ,
ಅಭಾವ ಸ್ವಭಾವ ನಿರ್ಭಾವದಲ್ಲಿ ಶುದ್ಧವಾಗಿ,
ದೀಕ್ಷೆ ಶಿಕ್ಷೆ ಸ್ವಾನುಭಾವವೆಂಬ
ದೀಕ್ಷಾತ್ರಯದಲ್ಲಿ ಅನುಮಾನವನ್ನರಿತು,
ಇಷ್ಟಲಿಂಗ ಪ್ರಾಣಲಿಂಗ ತೃಪ್ತಿಲಿಂಗವೆಂಬ
ಲಿಂಗತ್ರಯದ ಭೇದವಂ ಭೇದಿಸಿ,
ಶುದ್ಧ ಸಿದ್ಧ ಪ್ರಸಿದ್ಧವೆಂಬ ಪ್ರಸಾದತ್ರಯವಂ ಭೇದಿಸಿ,
ಸ್ವರ್ಗ, ಮರ್ತ್ಯ, ಪಾತಾಳವೆಂಬ
ಲೋಕತ್ರಯವನತಿಗಳೆದು,
ಇಹ ಪರ ಸ್ವಯವೆಂಬ
ಮುಕ್ತಿತ್ರಯದ ಹಂಗು ಹಿಂಗಿ,
ಮಥನ ನಿರ್ಮಥನ ಸಮ್ಮಥನವೆಂಬ
ಮಥನತ್ರಯದಲ್ಲಿ ನಿರತನಾಗಿ,
ರಾಜಸ ತಾಮಸ ಸಾತ್ವಿಕವೆಂಬ
ಗುಣತ್ರಯದ ಹಮ್ಮು ಬಿಟ್ಟು,
ವಿಶ್ವ ತೈಜಸ ಪ್ರಾಜ್ಞವೆಂಬ
ಜೀವತ್ರಯವನೊರಸಲೀಯದೆ,
ಆಣವಮಲ ಮಾಯಾಮಲ ಕಾರ್ಮಿಕಮಲವೆಂಬ
ಮಲತ್ರಯಂಗಳಂ ನಿರ್ಮಲವಂ ಮಾಡಿ,
ಗುರುನಿಂದೆ ಶಿವನಿಂದೆ ಭಕ್ತನಿಂದೆಯೆಂಬ
ನಿಂದಾತ್ರಯಂಗಳಂ ಕೇಳದೆ,
ಚಂದ್ರ ಸೂರ್ಯ ಅಗ್ನಿ ಎಂಬ
ನೇತ್ರತ್ರಯದ ಹೊಲಬನರಿದು,
ಪ್ರಾಹ್ನ ಮಧ್ಯಾಹ್ನ ಅಪರಾಹ್ನವೆಂಬ
ವೇಳಾತ್ರಯವಂ ಮೀರಿ,
ಉದರಾಗ್ನಿ ಶೋಕಾಗ್ನಿ ಕಾಮಾಗ್ನಿ ಎಂಬ
ಅಗ್ನಿತ್ರಯಕ್ಕೆ ಇಂಬುಗೊಡದೆ,
ಅಧೋನಿರಾಳ ಮಧ್ಯನಿರಾಳ ಊರ್ಧ್ವನಿರಾಳವೆಂಬ
ನಿರಾಳತ್ರಯದಲ್ಲಿ ನಿರತನಾಗಿ,
ಅನುಭಾವ ಮಹಾನುಭಾವ ಸ್ವಾನುಭಾವವೆಂಬ
ಅನುಭಾವತ್ರಯಂಗಳಲ್ಲಿ ಬೀಸರಹೊಂದದೆ,
ಬಾಲ್ಯ ಯೌವನ ವೃದ್ಧಾಪ್ಯವೆಂಬ
ತನುತ್ರಯಮಂ ಮರೆದು,
ತನು ಮನ ಧನದಲ್ಲಿ ಶುದ್ಧನಾಗಿ,
ಆಗಮತ್ರಯದಲ್ಲಿ ಅನುವರಿತು,
ಇಂತೀ ತ್ರಯ ಸಂಪಾದನೆಯಂ
ಮೀರಿದ ನಿಜಶರಣನೆ
ಕೂಡಲಚೆನ್ನಸಂಗಯ್ಯನೆಂದರಿದು ಸುಖಿಯಾದೆನು.
Art
Manuscript
Music
Courtesy:
Transliteration
Jñāna upāsthe paśujñānava
balla māta nuḍiyalāgadu,
utpatti sthiti layavemba kālatrayadalli bīḷade,
jāgrata svapna suṣuptiyemba
vyāpāratrayada anumānavaritu,
ādhyātmika ādhibhautika ādhidaivikavemba
tāpatrayavaṁ koḷalāgade,
arthēṣaṇa putrēṣaṇa dārēṣaṇavemba
īṣaṇatrayada bhrāntiyaḍagi,
abhāva svabhāva nirbhāvadalli śud'dhavāgi,
dīkṣe śikṣe svānubhāvavemba
dīkṣātrayadalli anumānavannaritu,
iṣṭaliṅga prāṇaliṅga tr̥ptiliṅgavemba
liṅgatrayada bhēdavaṁ bhēdisi,
Śud'dha sid'dha prasid'dhavemba prasādatrayavaṁ bhēdisi,
svarga, martya, pātāḷavemba
lōkatrayavanatigaḷedu,
iha para svayavemba
muktitrayada haṅgu hiṅgi,
mathana nirmathana sam'mathanavemba
mathanatrayadalli niratanāgi,
rājasa tāmasa sātvikavemba
guṇatrayada ham'mu biṭṭu,
viśva taijasa prājñavemba
jīvatrayavanorasalīyade,
āṇavamala māyāmala kārmikamalavemba
malatrayaṅgaḷaṁ nirmalavaṁ māḍi,
guruninde śivaninde bhaktanindeyemba
nindātrayaṅgaḷaṁ kēḷade,
candra sūrya agni emba
Nētratrayada holabanaridu,
prāhna madhyāhna aparāhnavemba
vēḷātrayavaṁ mīri,
udarāgni śōkāgni kāmāgni emba
agnitrayakke imbugoḍade,
adhōnirāḷa madhyanirāḷa ūrdhvanirāḷavemba
nirāḷatrayadalli niratanāgi,
anubhāva mahānubhāva svānubhāvavemba
anubhāvatrayaṅgaḷalli bīsarahondade,
bālya yauvana vr̥d'dhāpyavemba
tanutrayamaṁ maredu,
tanu mana dhanadalli śud'dhanāgi,
āgamatrayadalli anuvaritu,
intī traya sampādaneyaṁ
mīrida nijaśaraṇane
kūḍalacennasaṅgayyanendaridu sukhiyādenu.