Index   ವಚನ - 1261    Search  
 
ಜ್ಞಾನ, ಸುಜ್ಞಾನ, ಕೈವಲ್ಯಜ್ಞಾನ: ಜ್ಞಾನ, ತನುವಿನ ಪರಿಣಾಮ. ಸುಜ್ಞಾನ, ಪ್ರಾಣದ ಪರಿಣಾಮ. ಕೈವಲ್ಯಜ್ಞಾನ, ಮನದ ಪರಿಣಾಮ. ಗಮನದ ಭಾವದರಿವು ತ್ರಿವಿಧ: ವೈಲ, ವೈರಂಭಣ, ಮುಖಪ್ರಭಂಜನ. ಅಂತರ್ವಹ ವಾಯು ಭಾವದ ಚರಿತ್ರ. ಇದರ ಭೇದವ ಕೂಡಲಚೆನ್ನಸಂಗಾ ನಿಮ್ಮ ಶರಣನಲ್ಲದೆ ಕುಹಕಯೋಗಿಗಳವರೆತ್ತ ಬಲ್ಲರು?